
ಆ್ಯಕ್ನೆ ಎಂಬುದು ತೀರಾ ಸಾಮಾನ್ಯವಾದ ತ್ವಚೆಯ ಸಮಸ್ಯೆಯಾಗಿದೆ ಮತ್ತು ಎಣ್ಥೆ ಹಾಗೂ ಡೆಡ್ ಸ್ಕಿನ್ ಸೆಲ್ಗಳಿಂದಾಗಿ2 ತ್ವಚೆಯ ರೋಮ ರಂಧ್ರಗಳಲ್ಲಿ ತಡೆಯುಂಟಾದಾಗ ಈ ಪರಿಸ್ಥಿತಿ ಬಂದೊದಗುತ್ತದೆ. ಹೆಚ್ಚಾಗಿ ಆ್ಯಕ್ನೆ ಮುಖ, ಹಣೆ, ಎದೆ, ಭುಜ ಮತ್ತು ಬೆನ್ನಿನ ಮೇಲ್ಭಾಗದಲ್ಲಿ1 ಕಂಡುಬರುತ್ತವೆ. ಸಾಮಾನ್ಯವಾಗಿ ಇದು ಬರುವುದು ಹದಿಹರೆಯದವರಲ್ಲಾದರೂ, ಯಾವ ಪ್ರಾಯದವರಲ್ಲೂ1 ಆ್ಯಕ್ನೆ ಬರುವುದು ಸಾಧ್ಯವಿದೆ.

ಇದನ್ನು ಅಲೊಪೇಸಿಯಾ ಅಥವಾ ಬಾಲ್ಡ್ನೆಸ್ ಎಂದು ಕೂಡ ಕರೆಯಲಾಗುತ್ತದೆ. ಇದರ ಅರ್ಥ ತಲೆ ಅಥವಾ ಶರೀರದ ಭಾಗದಿಂದ ಕೂದಲು ಇಲ್ಲವಾಗುವುದು.

ಮೈಕೊಸಿಸ್/ತೆನಿಯಾ ಎಂದು ಕಡ ಕರೆಯಲಾಗುವ ಫಂಗಲ್ ಇನ್ಫೆಕ್ಷನ್, ಶಿಲೀಂದ್ರದಬಿ ಕಾರಣದಿಂದಾಗಿ ಉಂಟಾಗುವ ತ್ವಚೆಯ ರೋಗವಾಗಿದೆ.1 ಕಾಸೇಟೀವ್ ಫಂಗಸ್ನ್ನು ಡರ್ಮಾಟೊಫೈಟ್ಸ್ ಎಂದು ಕರೆಯಲಾಗುತ್ತದೆ.
ಲಕ್ಷಾಂತರ ಫಂಗೈ ಜಾತಿಗಳಿದ್ದು ಇವು ಕೊಳಕು ಪ್ರದೇಶದಲ್ಲಿಘಿ, ಸಸ್ಯಗಳಲ್ಲಿಘಿ, ಮನೆಗಳಲ್ಲಿ ಮತ್ತು ನಿಮ್ಮ ತ್ವಚೆಯ ಮೇಲೆ ಹುಟ್ಟಿ ಬೆಳೆಯುತ್ತವೆ.
ತ್ವಚೆಯ ಮೇಲಿನ ಫಂಗಲ್ ಇನ್ಫೆಕ್ಷನ್ನಿಂದಾಗಿ ಉರಿಯೂತ, ಕಂಪಗಾಗುವಿಕೆ, ಉಬ್ಬುಘಿ, ಇತ್ಯಾದಿಗಳು ಉಂಟಾಗುತ್ತವೆ ಮತ್ತು ಇವು ಕೆಲವು ದಿನಗಳಿಂದ ವಾರಗಳ ವರೆಗೆ ಉಳಿದಿರುತ್ತವೆ.

ಕಪ್ಪು ಕಲೆಗಳು ಅಥವಾ ಹೈಪರ್ಪಿಗ್ಮೆಂಟೇಶನ್ ಉಂಟಾಗುವುದು ನಿಮ್ಮ ತ್ವಚೆಯು ಹೆಚ್ಚು ಮೆಲಾನಿನ್ ಉತ್ಪಾದಿಸಿದಾಗ. ಇದರಿಂದಾಗಿ ನಿಮ್ಮ ತ್ವಚೆಯ ಮೇಲೆ ಆಸುಪಾಸಿನ ತ್ವಚೆಯ ಬಣ್ಣಕ್ಕಿಂತ ಕಪ್ಪಗಾಗಿರುವ ಚುಕ್ಕೆಗಳು ಅಥವಾ ತೇಪೆಗಳು ಕಂಡುಬರುತ್ತವೆ. ಇವುಗಳಿಂದ ಯಾವುದೇ ಹಾನಿ ಇಲ್ಲದಿದ್ದರೂ ಇವು ವ್ಯಕ್ತಿಯ ರೂಪಗೆಡಿಸುತ್ತವೆ.

ತ್ವಚೆ ಒಣದಾಗಿದ್ದರೆ ಅದರಲ್ಲಿ ಗೀಚು ಬೀಳುವುದು, ತುರಿಕೆ ಮತ್ತು ಬಿರಿಯುವಿಕೆಯಂಧ ಅಹಿತಕರ ಪರಿಸ್ಥಿತಿಗಳು ಉಂಟಾಗುತ್ತವೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಇಂಥ ಪರಿಸ್ಥಿತಿಗಳಲ್ಲಿ ನಿಮ್ಮ ತ್ವಚೆಯ ಮೇಲ್ಪದರವು ತೇವದ ಕೊರತೆಯಿಂದಾಗಿ ಒಣಗಿ ಹೋಗುತ್ತದೆ.